ಮಾರ್ಕೋ ಪ್ರಕ್ರಿಯೆ -
ಒಂದು ಸಂಭವತೆ ಪ್ರಕ್ರಿಯೆ(ಮಾರ್ಕೋಪ್ರೊಸೆಸ್) ಸಂಖ್ಯಾಕಲನ ವಿಜ್ಞಾನದ ಅಧಿಕಭಾಗ. ಸ್ವತಂತ್ರ ಸಂಭವಚರಗಳನ್ನು ಒಳಗೊಂಡಿದೆ. ಈ ಪರಿಕಲ್ಪನೆಯನ್ನು  ಅಂಗೀಕರಿಸುವುದರಿಂದ ಸಂಖ್ಯಾಕಲನವಿಜ್ಞಾನದಲ್ಲಿರುವ ಸೂತ್ರಗಳು ಸುಲಭವಾಗುತ್ತದೆ.  ಆದರೆ ದೈನಂದಿನ ಜೀವನದಲ್ಲಿ ಸ್ವಂತಂತ್ರ ಸಂಭವಚರಗಳು ಸಿಗುವುದು ಅತಿವಿರಳ. ಒಂದು ಕಂಪನಿ ಒಂದು ವರ್ಷದಲ್ಲಿ ಮಾರಿದ ವಸ್ತುಗಳ ಮೌಲ್ಯ ಸಂಭವಚರವಾದರೂ ಆ ವರ್ಷದ ಮಾರಾಟ ಹಿಂದಿನ ವರ್ಷದ ಮಾರಾಟಕ್ಕೆ  ಸಂಬಂಧಿಸಿರುವುದರಿಂದ ವಿವಿಧ ವರ್ಷಗಳ  ಮೌಲ್ಯಗಳು ಸ್ವತಂತ್ರವಾಗಿರುವುದಿಲ್ಲ. ಅಂತೆಯೇ ಇವು ಒಂದು ಊರಿನ ವಾರ್ಷಿಕ ಮಳೆ ಬೀಳುವೆಯ ಮೊತ್ತವನ್ನು ಸ್ವತಂತ್ರ ಸಂಭವಚರವೆಂದು ಪರಿಗಣಿಸಲು ಸಾಧ್ಯವಾಗದು. ಏಕೆಂದರೆ ವಾರ್ಷಿಕ ಮಳೆ ಬೀಳುವಿಕೆಯ ಏರಿಳಿತಗಳನ್ನು ಖಂಡಿತವಾಗಿ ಅಲ್ಲವಾದರೂ ಬಲು ಹೆಚ್ಚಿನ ಸಾಧ್ಯತೆಯಿಂದ ಊಹಿಸಲು ಸಾಧ್ಯವಿದೆ. ಒಂದು ವರ್ಷ ಮಳೆ ಬಲು ಹೆಚ್ಚಾದರೆ ಮರು ವರ್ಷ ಅದು ಅಷ್ಟು ಹೆಚ್ಚಾಗುವ ಸಾಧ್ಯತೆ ಬಲು ಕಡಿಮೆ. ಹೀಗಾಗಿ ಈ ಸಂಭವಚರಗಳು ಸ್ವತಂತ್ರವಾಗಿರುವುದಿಲ್ಲ. ಇಂಥ ಸಂದರ್ಭಗಳಲ್ಲಿ ಇವು ಸ್ವತಂತ್ರವೆಂದು ಪರಿಗಣಿಸುವುದು ಪ್ರಥಮ ಶ್ರೇಣಿಯ ಅಂದಾಜೇ ಸರಿ, ಎರಡನೇ ಶ್ರೇಣಿಯ ಅಂದಾಜೆಂದರೆ ಈ ಚರಗಳು ಮಾರ್ಕೋಫ್ ರೀತ್ಯ ಅಸ್ವತಂತ್ರಗಳೆಂದು ಪರಿಗಣಿಸುವುದು. ಸ್ಥೂಲವಾಗಿ, ಸಂಭವಚರಗಳ ಒಂದು ಸಮಷ್ಟಿಗೆ ಸಂಭಾವ್ಯತೆ ಪ್ರಕ್ರಿಯೆ ಎನ್ನುವರು. ಮಾರ್ಕೋಫ್ ಪ್ರಕ್ರಿಯೆ ಒಂದು ಉದಾಹರಣೆ.

ಆಂದ್ರೆ ಆಂದ್ರೀವಿಚ್ ಮಾರ್ಕೋಫ್ (1856-1922) ಅವರಿಂದ ಈ ಸಂಖ್ಯಾಕಲನಾತ್ಮಕ ಪ್ರಕ್ರಿಯೆಯ ಆವಿಷ್ಕøತವಾದ್ದರಿಂದ ಈ ಹೆಸರು ಬಂದಿದೆ.
(ಬಿ.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ